ಆತ್ಮೀಯ ಶಿಕ್ಷಕರೇ,
NEP-2020 ರ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ದೀಕ್ಷಾ ಪೋರ್ಟಲ್ ನಲ್ಲಿ ಈ ಆನ್ಲೈನ್ ಕೋರ್ಸ್ ಗಳನ್ನು ಮಾಡಬೇಕಾಗಿದೆ. ಇದರಲ್ಲಿ
EP-141 ರಿಂದ 149-EP ರ ವರೆಗಿನ ಮಾಡ್ಯೂಲ್ ಗಳು ಕಿರಿಯ ಹಾಗೂ ಹಿರಿಯ ತರಗತಿಯ ಶಿಕ್ಷಕರಿಗೆ ಕಡ್ಡಾಯವಾಗಿದ್ದು, ನಮತರ ಬೋಧಿಸುವ ವಿಷಯಗಳ ವಿಷಯವಾರು ಮಾಡ್ಯೂಲ್ ಗಳನ್ನು ತಾವೇ ಆಯ್ಕೆ ಮಾಡಿಕೊಂಡು ಪೂರ್ಣಗೊಳಿಸಬೇಕಾಗುತ್ತದೆ.
ಆತ್ಮೀಯ ಶಿಕ್ಷಕರೆ ತಾವೆಲ್ಲ ಇದೇ ಜೂನ್ ಒಂದರಿಂದ ಪ್ರಾರಂಭವಾಗಿ ಸಪ್ಟಂಬರ್ 30ರವರೆಗೆ ಗುರುಚೇತನ ಕಾರ್ಯಕ್ರಮದಡಿ NEP ಆಧಾರಿತ ನಿಷ್ಠ ಮಾಡೆಲ್ಗಳನ್ನು ಓದಬೇಕಿರುತ್ತದೆ. ಇದರಲ್ಲಿ1-8 ನೇ ತರಗತಿಯ ಬೋಧಿಸುವ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ 9 ಜೆನರಿಕ್ ಮಾಡ್ಯೂಲ್ಗಳನ್ನು ಹಾಗೂ ಉಳಿದಂತೆ ತಾವು ಆಯ್ಕೆಯಾದ ವಿಷಯಕ್ಕೆ ಅಥವಾ ತಾವು ಬೋಧಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 1 ಮತ್ತು ಗರಿಷ್ಠ 3 ಮಾಡೆಲ್ಗಳನ್ನು ( ಹೆಚ್ಚಿನ ವಿವರಗಳನ್ನು ನಂತರ ತಿಳಿಸಲಾಗುವುದು) ಓದಬೇಕಿರುತ್ತದೆ. ಮತ್ತು ಈ ಹಿಂದೆ ನಿಷ್ಠ ಕಾರ್ಯಕ್ರಮದಲ್ಲಿ ತಾವು ಓದಿ ಯಶಸ್ವಿಯಾಗಿ ಪೂರ್ಣಗೊಳಿಸಿ ನಂತರ ರಸಪ್ರಶ್ನೆಯಲ್ಲಿ ಶೇಕಡಾ 70 ರಷ್ಟು ಅಂಕಗಳನ್ನು ಪಡೆದ ನಂತರ ಪ್ರಮಾಣಪತ್ರವನ್ನು ಪಡೆದಿರುವಂತೆ ಇಲ್ಲಿಯೂ ಕೂಡ ಅದೇ ರೀತಿ ಶೇಕಡಾ 70 ರಷ್ಟು ಅಂಕ ಗಳಿಕೆಯೊಂದಿಗೆ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
◾️ *ಮಾಡುಲ್ 141 ರಿಂದ 149 ವರೆಗೆ ಎಲ್ಲರೂ ಕಡ್ಡಾಯವಾಗಿ ಮುಗಿಸಬೇಕಾದ ಮಾಡುಲ್ ಗಳಾಗಿದ್ದು ಇವುಗಳನ್ನು ಎಲ್ಲರೂ ಪೂರ್ಣಗೊಳಿಸಿ*
◾️ *ಅದೇ ರೀತಿ ನಲಿಕಲಿ ಶಿಕ್ಷಕರಾಗಿದ್ದರೆ 131,135,150 ಕೋರ್ಸ್ಗಳನ್ನು ಓದಿ*
◾️ *4&5 ತರಗತಿಯ ಶಿಕ್ಷಕರಾಗಿದ್ದರೆ 132,137,152 ಕೋರ್ಸ್ ಗಳನ್ನು ಓದಿ*
◾️ *6-8 ನೇ ತರಗತಿಗಳನ್ನು ಬೋಧಿಸುವ ಶಿಕ್ಷಕರಾಗಿದ್ದರೆ ವಿಷಯವಾರು 133,134,135,138,139,140 ನೇ ಕೋರ್ಸ್ ಗಳನ್ನು ಓದಿ*
◾️ ಸದರಿ ಕೋರ್ಸ್ಗಳನ್ನು ಓದಲು ತಿಂಗಳುವಾರು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಸೆಪ್ಟೆಂಬರ್ 30ರ ಒಳಗಾಗಿ ಈ ಎಲ್ಲಾ ಕೋರ್ಸುಗಳನ್ನು ಕಡ್ಡಾಯವಾಗಿ ತಾವು ಓದಿರಲೇಬೇಕು.
◾️ ಲಭ್ಯವಿರುವ ಮಾಡ್ಯೂಲ್ ಲಿಂಕಗಳನ್ನು ಕೆಳಗಡೆ ನೀಡಲಾಗಿದೆ
◾️ ಎಲ್ಲಕ್ಕಿಂತ ಮುಖ್ಯವಾಗಿ ತಾವು ಈ ಕೋರ್ಸ್ ಗಳನ್ನು ಓದಲು ಸರಿಯಾದ ಲಾಗಿನ್ ನಲ್ಲಿ ಕೋರ್ಸುಗಳನ್ನು ಓದಲು ಪ್ರಾರಂಭಿಸಿ( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
◾️ ಒಂದು ವೇಳೆ ತಮಗೆ ಏನಾದರೂ ತಾಂತ್ರಿಕ ಕಾರಣದಿಂದ ಲಾಗ್ಇನ್ ಸಮಸ್ಯೆಗಳ ಆಗಿದ್ದಲ್ಲಿ ತಮ್ಮ ಸಿಆರ್ಪಿ ರವರನ್ನು ಮತ್ತು ಬಿಆರ್ಸಿ ಪ್ರೋಗ್ರಾಮರ್ ಅವರನ್ನು ಹಾಗೂ ಬಿ ಆರ್ ಪಿ ರವರುಗಳನ್ನು ಸಂಪರ್ಕಿಸಿ ಲಾಗಿನ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ.
ನಿಮಗಾಗಿ ಒಂದೇ ಕಡೆ ಲಭ್ಯವಾಗುವಂತೆ ತರಬೇತಿಯ ಎಲ್ಲ ಮಾಧ್ಯಮದ ಮಾಡ್ಯುಲ್ ಗಳನ್ನು search ಮಾಡಲು ಅನುಕೂಲ ಮಾಡಲಾಗಿದೆ.ಇದರ ಸದುಪಯೋಗ ತಾವೆಲ್ಲ ಪಡೆದುಕೊಳ್ಳಬೇಕಾಗಿ ವಿನಂತಿ
ವಂದನೆಗಳೊಂದಿಗೆ
just click below link for Modules link